Devi Stuti · Sutra 11 of 23
Modesty as Protection
ಲಜ್ಜಾ · Lajja. Guruji on the verse that bows to the Devi as modesty.
ಯಾ ದೇವೀ ಸರ್ವಭೂತೇಷು ಲಜ್ಜಾರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
Yā devī sarvabhūteṣu lajjārūpeṇa saṃsthitā
Namastasyai namastasyai namastasyai namo namaḥ
That Devi who abides in all beings in the form of modesty: salutations to Her, again and again.
Humility, refinement, reserve, modesty.
To this Devi Shakti, present in every class of creature in the world in the form of lajja, that is humility, refinement, reserve and modesty, salutations, salutations, salutations.
Lajja is a beautiful power that comes out of our inner awareness. It takes the form of reserve and shows itself in our life and on our body as a good, natural quality. Notably, modesty and reserve are a stronger bodily quality in women than in men.
These days, though, some people treat modesty as a weakness (weakness and carelessness).
Example: “Why be shy? Why hold back? Let’s be carefree and live shamelessly.” Saying this, they smoke cigarettes, get high, drink, take drugs, turn everything upside down, speak badly and pick fights. “Why should I feel shame or modesty? What do I gain from it?” That is some people’s mindset.
But modesty gives our life at least some guidance: a good path, discipline, order.
It is the power of the Devi, the Adi Shakti, that gives us this discipline and shows us good guidance.
Modesty is not bad. It is a refined (sophisticated), improving quality, a special quality within us that stops our life from falling.
Lajja does not mean that we must be ashamed or shrink.
Example: some people, when they sit down to eat and look at the food on the plate, feel a gut reaction from their inner awareness and hold back (a gut feeling). This means the neurons in our brain, through the mind, are expressing reserve: this is not good for us, not good physically, mentally or for our health.
In the same way it sometimes signals danger. At such times, in the form of reserve and modesty, it leads us to a safe path.
Likewise, if you touch the tiny insects that crawl on the ground, they too curl up in reserve. Some insects roll into a ball and stay safe that way.
So modesty and reserve carry the meaning of safety.
In India, a shameless person is called someone without good qualities, a bad person, a person of bad character. It is not a good word. Such people are called nirlajja, shameless.
Shameless people live without limits, without boundaries, without rules and regulations, without reserve. They think they can do whatever they like, anything at all, and they live without modesty or shame.
Just as there is a gut feeling inside the body, there is a gut feeling in the inner mind too. In thoughts, in feelings and in many situations, a person feels reserve and shame, and sinks and shrinks. We do not want all that.
But because of certain events and situations in the body, harmful effects may slowly build up inside.
Because we keep producing them slowly; we keep programming ourselves that way. The harmful effects on our state of mind from today’s small habits become the causes of tomorrow’s big harms.
So you activate reserve, modesty and lajja within yourself, and it becomes a kind of protective armour for us. We stop still, right there.
When we walk and slip or stumble, we feel a little embarrassed.
Those without modesty, whatever happens, do whatever they please and stay foolish in their own way (careless).
The Yoga Sutras say: be restrained, cultivate good qualities, and practise the yamas and niyamas widely with discipline.
So the Devi’s power, spread widely in the form of modesty, keeps the body safe and shields the mind (protection). It shows its meaning in many ways.
When we have no desire for something, our body and mind produce and show a feeling of reserve. That is lajja. In this form the Devi is the power of modesty, a shield that keeps every body and mind safe. So no one should be shameless.
Because one should not break the definitions and rules of a place, a time and a law.
Living by suppressing and trampling the sense of what is right in our body and mind, its words, the voices of the inner mind: that is a shameless life.
There is a call of the inner mind, a call of infinite consciousness, a call to a rhythmic life: an initiated way of living. We should live a life bound by initiation, with natural qualities.
When we walk with such natural qualities, we have many experiences we understand, and some we do not.
Lajja is something that is felt, and when it is felt we should step back a little.
So now and then in life we need to step back a little. Drawing in becomes necessary, and this state of necessity too is a form of the Mother.
As the motherhood of existence, as the Mother within us, she protects us naturally, gives us safety and gives us a shield (protection).
This sutra says “lajja rupena samsthita”: in the awakening state we walk with a disciplined restraint that comes from within.
With a disciplined mind (systematic), we can attain success, prosperity and completeness at every stage of life.
Lack of restraint and shamelessness mean the same thing. Modest restraint is a quality of character. Through it the Devi’s power makes our body and mind perfect in every way, makes our whole life perfect in every way, and gives us protection.
Guruji’s original notes in Kannada, as he wrote them.
“ ನಮ್ರತೆ / ನಾಗರೀಕತೆ / ಸಂಕೋಚ / ನಾಚಿಕೆ ”
ಈ ದೇವಿಶಕ್ತಿ ಸಂಸಾರದ ಎಲ್ಲಾ ಪ್ರಾಣಿ ವರ್ಗಗಳಲ್ಲಿ, ಲಜ್ಜ ಅಥವಾ ನಮ್ರತೆ / ನಾಗರೀಕತೆ / ಸಂಕೋಚ / ನಾಚಿಕೆ ರೂಪದಲ್ಲಿ ವಿದ್ಯಮಾನಗಳಾಗಿರುವ ಈ ಶಕ್ತಿಗೆ ನಮಸ್ಕಾರ ನಮಸ್ಕಾರ ನಮಸ್ಕಾರ.
ಲಜ್ಜ ಎಂದರೆ: ನಮ್ಮ ಅಂತರ್ ಪ್ರಜ್ಞೆಯಿಂದ ಹೊರಬರುವ ಒಂದು ಸುಂದರವಾದ ಶಕ್ತಿ ಈ ಶಕ್ತಿ ಸಂಕೋಚದ ರೂಪ ಪಡೆದು ನಮ್ಮ ಜೀವನದಲ್ಲಿ ಹಾಗೂ ಶರೀರದ ಮೇಲೆ ಒಳ್ಳೆಯ ಸಹಜತೆಯ ಗುಣ ರೂಪವನ್ನು ತೋರಿಸುತ್ತದೆ. ವಿಶೇಷತೆ ಏನೆಂದರೆ, ಪುರುಷರಿಗಿಂತ ಸ್ತ್ರೀಯರಲ್ಲಿ ಲಜ್ಜ/ ನಾಚಿಕೆ /ಸಂಕೋಚ ಎಂಬುದು ಅಧಿಕವಾದ ಶಾರೀರಿಕ ಗುಣವಾಗಿರುತ್ತದೆ
ಆದರೆ, ಈ ದಿನಗಳಲ್ಲಿ ಕೆಲವರಿಗೆ ಲಜ್ಜೆ ಎನ್ನುವುದು ದೌರ್ಬಲ್ಯವಾಗು ಇರುತ್ತದೆ.(weakness) and (carelessness)
Ex: ನಾಚಿಕೆ ಯಾಕೆ ಪಡಬೇಕು? ಸಂಕೋಚ ಯಾಕೆ ಮಾಡಬೇಕು?
ಬಿಂದಾಸ್ ಆಗಿರೋಣ, ನಿರ್ಲಜ್ಜೆಯಿಂದ ಬದುಕೋಣ, ಎನ್ನುತ್ತಾ cigrate ಸೇದುತ್ತಾ, ನಶೆ ಮಾಡ್ತಾ, ಮದ್ಯಪಾನ ಸೇವನೆ ಮಾಡ್ತಾ, ಡ್ರಗ್ ಸೇವನೆ ಮಾಡ್ತಾ, ಉಲ್ಟಾ ಪಲ್ಟಾ ಮಾಡು, ಕೆಟ್ಟ ಮಾತನಾಡು, ಜಗಳ ಮಾಡು, ನಾಚಿಕೆ / ಲಜ್ಜೆ ಯಾಕೆ ಪಡಬೇಕು? ಇದರಿಂದ ನನಗೇನಾಗಬೇಕು? ಎನ್ನುವ ಕೆಲವರ ಮನಸ್ಥಿತಿ.
ಆದರೆ, ನಾಚಿಕೆ / ಲಜ್ಜ ಎನ್ನುವ ಅರ್ಥ ನಮ್ಮ ಜೀವನವನ್ನು ಸ್ವಲ್ಪವಾದರೂ ಒಳ್ಳೆಯ ದಾರಿಯನ್ನ, ಕ್ರಮ ಶಿಕ್ಷಣವನ್ನು, ಅಥವಾ ಅನುಶಾಸನವನ್ನು, ಮಾರ್ಗದರ್ಶನ ಕೊಡುತ್ತದೆ.
ದೇವಿ ಆದಿಶಕ್ತಿಯ ಶಕ್ತಿಯೇ ನಮ್ಮಲ್ಲಿ ಒಂದು ಅನುಶಾಸನವನ್ನು ಕೊಟ್ಟು, ಹಾಗೂ ಒಳ್ಳೆಯ ಮಾರ್ಗದರ್ಶನವನ್ನು ತೋರಿಸುತ್ತದೆ.
ಲಜ್ಜೆ ಕೆಟ್ಟದ್ದಲ್ಲ, ಇದು ಒಂದು ಆಧುನಿಕವಾದ (sophisticated) ಒಳ್ಳೆಯ ಸುಧಾರಣೆಯ ಗುಣವನ್ನು ನಮ್ಮೊಳಗೆ ಒಂದು ವಿಶೇಷತೆಯ ಗುಣದಿಂದ, ನಮ್ಮ ಜೀವನ ಪಥನವಾಗುವುದನ್ನು ತಡೆಯುತ್ತದೆ.
ಲಜ್ಜ ಎಂದರೆ: ನಾಚಿಕೆ ಪಡಬೇಕು / ಸಂಕೋಚ ಗೊಳ್ಳಬೇಕು ಎಂಬ ಅರ್ಥ ಅಲ್ಲ.
Ex: ಕೆಲವರು ಊಟಕ್ಕೆ ಕೂರಲು ಹೋದಾಗ ತಟ್ಟೆಯಲ್ಲಿ ಊಟವನ್ನು ನೋಡಿದಾಗ ಅವರಲ್ಲಿ ಕರುಳಿನ ಭಾವನೆಯೊಂದಿಗೆ ಅಂತರ್ ಪ್ರಜ್ಞೆಯ ಪ್ರತಿಕ್ರಿಯೆಯಿಂದ ಸಂಕೋಚವಾಗುತ್ತದೆ (Gut Feeling)
ಇದರ ಅರ್ಥ ನಮ್ಮ ಮೆದುಳಲ್ಲಿರುವ ನ್ಯೂರಾನ್ ಗಳು (neurons) ಮನಸ್ಸಿನ ಮುಖಾಂತರ ಲಜ್ಜ / ಸಂಕೋಚವನ್ನು ವ್ಯಕ್ತಪಡಿಸುತ್ತದೆ.
ಇದು ನಮಗೆ ಒಳ್ಳೆಯದಲ್ಲ, ಶಾರೀರಿಕವಾಗಿ, ಮಾನಸಿಕವಾಗಿ, ಆರೋಗ್ಯಕರವಾಗಿ ಒಳ್ಳೆಯದಲ್ಲ.
ಅದೇ ರೀತಿ ಕೆಲವು ಬಾರಿ ಕೆಟ್ಟದಾಗುವ (Danger) ಸೂಚನೆಯು ತೋರಿಸುತ್ತದೆ. ಆ ಸಮಯದಲ್ಲಿ ಸಂಕೋಚ / ಲಜ್ಜಾ ರೂಪದಿಂದ ನಮ್ಮನ್ನು ಸುರಕ್ಷಿತ ಮಾರ್ಗಕ್ಕೆ ಕೊಂಡೊಯ್ಯುತ್ತದೆ.
ಅದೇ ರೀತಿ ನೆಲದ ಮೇಲೆ ಓಡಾಡುವ ಸಣ್ಣ ಕ್ರಿಮಿಕೀಟಗಳನ್ನು ಮುಟ್ಟಿದರೆ, ಅದನ್ನು Touch ಮಾಡಿದಾಗ, ಆ ಕೀಟಗಳು ಸಹ ಸಂಕೋಚದಿಂದ / ಲಜ್ಜೆಯಿಂದ ಮುದುಡಿಕೊಳ್ಳುತ್ತದೆ. ಕೆಲವು ಕೀಟಗಳು ಸುರುಳಿಯಾಗಿ ಸುತ್ತಿಕೊಂಡು ಸುರಕ್ಷಿತವಾಗಿ ಇದ್ದು ಬಿಡುತ್ತದೆ (round).
ಆದ್ದರಿಂದ ಲಜ್ಜ / ಸಂಕೋಚ ಎಂದರೆ ಸುರಕ್ಷತೆಯ ಒಂದು ಅರ್ಥ.
ಹೀಗೆ ಭಾರತದಲ್ಲಿ ನಿರ್ಲಜ್ಜೆಯನ್ನು ಒಳ್ಳೆಯ ಗುಣ ವಿಲ್ಲದ ವ್ಯಕ್ತಿ ಎಂದು, ಕೆಟ್ಟ ವ್ಯಕ್ತಿ ಎಂದು, ಒಳ್ಳೆಯ ಗುಣ ವಿಲ್ಲದೆ ಅವಗುಣ ವ್ಯಕ್ತಿಯೆಂದು, ಇದು ಒಳ್ಳೆಯ ಶಬ್ದ ಅಲ್ಲವೆಂದು
ಹೇಳುತ್ತ, ಈ ರೀತಿಯ ವ್ಯಕ್ತಿಗಳು ನಿರ್ಲಜ್ಜ ವ್ಯಕ್ತಿಗಳೆಂದು ಎಂದು ಹೇಳುತ್ತಾರೆ.
ನಿರ್ಲಜ್ಜ ವ್ಯಕ್ತಿಗಳು ಹೇಗಿರುತ್ತಾರೆoದರೆ ಮಿತಿ ಇಲ್ಲದೆ, ಸೀಮಿತ ಗತಿಯಿಲ್ಲದೆ (boundary), ನಿಯಮಾವಳಿ ಗಳಿಲ್ಲದೆ (rules & regulations), ಸಂಕೋಚವಿಲ್ಲದೆ,
ತನ್ನಷ್ಟಕ್ಕೆ ತಾನು ಏನು ಬೇಕಾದರೂ ಮಾಡಬಹುದು, ಏನು ಬೇಕಾದ್ರೂ ಮಾಡಬಹುದುದೆಂದು, ಲಜ್ಜೆಗೆಟ್ಟು ನಾಚಿಕೆ ಇಲ್ಲದೆ ಬದುಕುತ್ತಿರುತ್ತಾರೆ.
ಹೇಗೆ ಶರೀರದ ಒಳಗೂ ಒಂದು ಕರುಳಿನ ಭಾವನೆ ಆಗುತ್ತೋ (Gut Feeling),
ಅದೇ ರೀತಿ ಅಂತರ್ ಮನದ ಒಳಗೂ ಒಂದು ಕರುಳಿನ ಭಾವನೆಯಾಗಿ (Gut Feeling) ವಿಚಾರಗಳಲ್ಲಿ, ಭಾವನೆಗಳಲ್ಲಿ, ಹಲವು ರೀತಿಯ ಸ್ಥಿತಿಗತಿಗಳಲ್ಲಿ, ಸಂಕೋಚ ನಾಚಿಕೆಯನ್ನು ಪಡೆದು, ಕುಸಿಯುತ್ತಾನೆ / ಕುಗ್ಗುತಾನೆ (Shrink), ಇದೆಲ್ಲಾ ನಮಗೆ ಬೇಡವಾದದ್ದು.
ಆದರೆ ಶರೀರದಲ್ಲಿ ನಡೆಯುವ ಕೆಲವು ಘಟನೆಗಳ / ಪರಿಸ್ಥಿತಿಗಳ ಕಾರಣಗಳಿಂದ ನಿಧಾನವಾಗಿ ಒಳಗೆ ದುಷ್ಪರಿಣಾಮಗಳಾಗುವ ಸಾಧ್ಯತೆ ಇದೆ.
ಏಕೆಂದರೆ ನಾವುಗಳು ನಿಧಾನಗತಿಯಿಂದ ಅವುಗಳನ್ನು ಉತ್ಪತ್ತಿ ಮಾಡುತ್ತ ಇರುತ್ತೀರಿ. ಅಂತಹ Program ಮಾಡುತ್ತಾ ಇರುತ್ತೀರಿ, ಈಗಿನ ಚಿಕ್ಕ ಚಿಕ್ಕ ಅಭ್ಯಾಸದಿಂದ ಆಗುವ ಮನಸ್ಥಿತಿಯ ದುಷ್ಪರಿಣಾಮಗಳೇ ನಾಳೆಯ ದೊಡ್ಡದೊಡ್ಡ ದುಷ್ಪರಿಣಾಮಗಳಿಗೆ ಕಾರಣವಾಗುತ್ತದೆ.
ಆದ್ದರಿಂದ ಸಂಕೋಚ / ನಾಚಿಕೆ / ಲಜ್ಜ ಎಂದು ನಮ್ಮೊಳಗೆ ಸಕ್ರಿಯಗೊಳಿಸುತೀರಿ, ಆಗ ನಮಗೆ ಒಂದು ರೀತಿಯ ಸುರಕ್ಷತೆ ಕವಚ ವಾಗುತ್ತದೆ. ನಾವು ಸ್ತಬ್ಧವಾಗಿ ಅಲ್ಲೇ ನಿಲ್ಲುತ್ತೇವೆ.
ನಾವು ಓಡಾಡುವಾಗ / ಜಾರಿದಾಗ / ಎಡವಿದಾಗ ಸ್ವಲ್ಪ ಸಂಕೋಚ ಪಡುತ್ತೇವೆ.
ಲಜ್ಜೆಯಿಲ್ಲದೆ ನಿರ್ಲಜ್ಜೆಯಿಂದ ಏನೇ ಆದರೂ ಸಹ ತನಗೆ ತಾನು ಏನು ಮಾಡಿದರು, ತನ್ನಿಷ್ಟಕ್ಕೆ ತಾನು ಮೂರ್ಖತನದಿಂದ ಇರುತ್ತಾರೆ (careless).
ಯೋಗಸೂತ್ರ ಹೇಳಿರುವುದು ಸಂಯಮದಿಂದಿರಿ, ಒಳ್ಳೆಯ ಗುಣಗಳನ್ನು ಪಾಲನೆ ಮಾಡಿ, ಯಮ ನಿಯಮಗಳನ್ನು ಕ್ರಮ ಶಿಕ್ಷಣದಿಂದ ವ್ಯಾಪಕವಾಗಿ ಪಾಲನೆ ಮಾಡಿ.
ಹೀಗೆ ದೇವಿ ಶಕ್ತಿ ಲಜ್ಜಾ ರೂಪದಿಂದ ವ್ಯಾಪಕವಾಗಿ, ಶರೀರವನ್ನು ಸುರಕ್ಷತೆಗೊಳಿಸಿ, ಮನಸ್ಸನ್ನು ಕವಚವಾಗಿಸಿ (protect) ಹಲವು ವ್ಯಾಪಕ ರೀತಿಯ ಅರ್ಥ ತೋರಿಸುತ್ತದೆ.
ನಮಗೆ ಯಾವ ಅಪೇಕ್ಷೆ ಇಲ್ಲವೋ ನಮ್ಮ ಶರೀರ, ಮನಸ್ಸು ಸಂಕೋಚವಾದ ಭಾವನೆ ಉತ್ಪತ್ತಿ ಮಾಡುತ್ತೆ, ತೋರಿಸುತ್ತೆ ಅದೇ ಲಜ್ಜ.
ದೇವಿ ಈ ರೂಪದಿಂದ ಎಲ್ಲಾ ಶರೀರ, ಮನಸ್ಸಿನ ಸುರಕ್ಷತೆಯಾಗಿ ಒಂದು ಕವಚದ ರೀತಿ ಆ ದೇವಿಶಕ್ತಿ ಲಜ್ಜಾ ರೂಪದ ಶಕ್ತಿ ಆಗಿದ್ದಾಳೆ. ಆದ್ದರಿಂದ ಯಾರು ನಿರ್ಲಜ್ಜ ಮಾಡಬಾರದು.
ಏಕೆಂದರೆ ಒಂದು ದೇಶದ, ಕಾಲದ, ವಿಧಿಯ ಪರಿಭಾಷೆಗಳನ್ನು, ನಿಯಮಗಳನ್ನು ಮುರಿಯಬಾರದು / break ಮಾಡಬಾರದು.
ಹಾಗೆ ನಮ್ಮ ಶರೀರದ ಮನದ ಮಾನ್ಯತೆಗಳನ್ನು, ಮಾತುಗಳನ್ನು, ಅಂತರ್ ಮನಸಿನ ಶಬ್ದಗಳನ್ನು, ಅದುಮಿ ತುಳಿದು ಬದುಕುವುದು ನಿರ್ಲಜ್ಜತೆಯ ಜೀವನ.
ಅಂತರ್ ಮನದ ಕೂಗು, ಅನಂತ ಚೇತನ ಶಕ್ತಿಯ ಕೂಗು, ಲಯಬದ್ಧ ಜೀವನದ ಕೂಗು, ಅಂದರೆ Initiated way of living. ದೀಕ್ಷಾ ಬದ್ಧ ಜೀವನ, ಸಹಜ ಗುಣಗಳಿಂದ ಜೀವನ ನಡೆಸಬೇಕು.
ಇಂತಹ ಸಹಜ ಗುಣಗಳಿಂದ ನಡೆಯುವಾಗ ಹಲವು ಅರ್ಥವಾಗುವ ಅನುಭವವಾಗುತ್ತೆ, ಅರ್ಥವಾಗದ ಅನುಭವವು ಆಗುತ್ತದೆ.
ಲಜ್ಜ ಎಂದರೆ ಅನುಭವವಾಗುವ ವಿಷಯ, ಆಗ ನಾವು ಸ್ವಲ್ಪ ಹಿಂದೆ ಸರಿಯಬೇಕು.
ಅದರಿಂದ ಜೀವನದಲ್ಲಿ ಆಗಾಗ ಸ್ವಲ್ಪ ಹಿಂದೆ ಸರಿಯಬೇಕು. ಸಂಕುಚಿತವಾಗ ಬೇಕಾದ ಅನಿವಾರ್ಯವಾಗುತ್ತದೆ. ಹೀಗೆ ಅನಿವಾರ್ಯತೆ ಯಾಗುವುದು ಸ್ಥಿತಿ ಸಹ ಮಾತೃ ರೂಪವೇ.
ಅಸ್ತಿತ್ವದ ಮಾತೃತ್ವ ವಾಗಿ, ತಾಯಿ ರೂಪವಾಗಿ ನಮ್ಮೊಳಗೆ ಇದ್ದು, ನಮ್ಮನ್ನು ಕಾಪಾಡುತ್ತಾ, ಸಹಜತೆಯಿಂದ, ಸುರಕ್ಷತೆಯನ್ನು ಕೊಟ್ಟು ಕವಚವನ್ನು ಕೊಡುತ್ತದೆ (protection).
ಈ ಸೂತ್ರ ಹೇಳುತ್ತದೆ ಲಜ್ಜಾ ರೂಪೇಣ ಸಂಸ್ಥಿತಾ, awakening state / ಜಾಗೃತಾವಸ್ಥೆಯ ಒಂದು ಒಳಗಿನಿಂದ ಬರುವ ಅನುಶಾಸಿತವಾದ ಸಂಯಮದಿಂದ ನಡೆಯುತ್ತೇವೆ.
ಶಿಸ್ತುಬದ್ಧ ಮನಸಿನಿಂದ (systematic) ನಮ್ಮ ಜೀವನದ ಎಲ್ಲ ಹಂತಗಳಲ್ಲಿ ಯಶಸ್ಸು ಸಂಪನ್ನತೆಯ ಪರಿಪೂರ್ಣತೆಯನ್ನು ಪಡೆಯಬಹುದು
ಅಸಂಯಮ ಮತ್ತು ನಿರ್ಲಜ್ಜ ಒಂದೇ ರೀತಿಯ ಅರ್ಥ. ಲಜ್ಜಾವಾನ್ ಸಂಯಮ ಒಂದು ಗುಣಧರ್ಮದ ಅರ್ಥವಾಗಿ, ನಮ್ಮ ಶರೀರ, ಮನಸ್ಸನ್ನು ಎಲ್ಲಾ ರೀತಿಯಲ್ಲೂ ಪರಿಪೂರ್ಣತೆಗೊಳಿಸಿ (perfect), ಹಾಗೂ ಸಂಪೂರ್ಣ ಜೀವನವನ್ನು ಎಲ್ಲಾ ರೀತಿಯಲ್ಲೂ ಪರಿಪೂರ್ಣತೆಗೊಳಿಸಿ ಒಂದು ಸುರಕ್ಷತೆಯನ್ನು ಕೊಡುತ್ತಾಳೆ, ಆ ದೇವಿ ಶಕ್ತಿ.
Translated from Guruji’s Kannada notes on this sutra. The Devi Stuti talks are on the Spiritual Conscious YouTube channel. All 23 sutras are also in a free book, The Devi Within (PDF).