Devi Stuti · Sutras 22 & 23 of 23
The Senses and the All-Pervading Consciousness
ಇಂದ್ರಿಯ ಮತ್ತು ಚಿತಿ · Indriya and Chiti. Guruji on the verse that bows to the Devi as the senses and all-pervading consciousness.
ಇಂದ್ರಿಯಾಣಾಮಧಿಷ್ಠಾತ್ರೀ ಭೂತಾನಾಂ ಚಾಖಿಲೇಷು ಯಾ
ಭೂತೇಷು ಸತತಂ ತಸ್ಯೈ ವ್ಯಾಪ್ತ್ಯೈ ದೇವ್ಯೈ ನಮೋ ನಮಃ
Indriyāṇām adhiṣṭhātrī bhūtānāṃ cākhileṣu yā
Bhūteṣu satataṃ tasyai vyāptyai devyai namo namaḥ
To that Devi who governs the senses of beings in all the worlds: salutations to Her, the Devi who always pervades all beings.
This Devi sets the systems of the senses in motion in every living being, and through them She pervades every class of creature at all times. To that Shakti, salutations, salutations, salutations.
The Indian Sanatana tradition follows a set rule. After it has shared each treasury of spiritual knowledge, it reminds us of that knowledge again, so that we keep it safely in the mind and in the subconscious mind.
We call this play of the Adi Shakti chetana, consciousness. A power abides in its original form within us and sets all the systems of our senses in motion. It is a conscious power that pervades every class of being continuously, without a break, and it keeps bringing everything into manifestation.
When body and mind come into being, the system of the senses also begins to move. No one can know how the senses grow stronger or weaker, because that Devi Shakti pervades body and mind constantly, standing behind the senses in the form of their systems. Influences coming from outside make the senses dull and distorted.
That too is the play of the Adi Shakti. When we walk the spiritual path, the first fight that begins is with the senses. We wrestle and struggle with them, and we are told that they must be brought onto the pure path.
So when we walk the path of purity, we turn the senses into enemies. This is because we have never seen or experienced their divine forms, though the play of the Adi Shakti is present there too.
What is the system of the senses? Form and colour, a pleasing fragrance, a good taste, good sight, a good sound and a sweet, gentle touch. All of this is experience that comes through the senses, and it too is the play of the Adi Shakti.
Yet spiritual people are alarmed and afraid of sense experience. They struggle, saying “We don’t want sense experience,” and insist they want only the experience of conscious power. That is because they do not know what the experience of consciousness is.
The point is this: it is conscious power itself that brings about experience through the medium of the senses. There is no other method of experiencing it.
What does happen is that the journey from impurity to purity in our senses becomes the spiritual journey of Shiva-Shakti sadhana.
For example: just as coal is made into diamond, there is a journey from impurity to purity.
What happens when we watch the senses and give up the taste of their experience? We are told:
- Do not hear what is bad; hear good sounds.
- Do not take in bad smells; seek good fragrance.
- Do not look at what is bad; look at what is good.
- Do not touch what is bad; touch only what is good.
- Do not taste what is bad; taste what is good.
But all of this is the play of the Adi Shakti. People live under the illusion that by giving all this up they will advance in spiritual practice. Instead, the senses simply become dull.
Wherever the senses are in an ordered state, Shakti is present. It works as an eternal law, balancing everything within us and guiding our life. The senses too are a form of the Devi’s power, and the power that moves behind them is the Adi Shakti.
Look at people who keep their senses in turmoil. Confused and unsettled, they never enjoy the taste of experience through the senses, and they suffer from ill health. When any sense is thrown off balance, a great deal of trouble follows.
To set such problems right, you must stay natural and in a good state with your senses and what they perceive.
These are faultless, pure senses. They should not be overstimulated; they are like children. When you overstimulate them, the senses become dull.
So keep them divine and pure, because as the play of the Adi Shakti they are run by very beautiful laws.
Keep and protect your whole body and mind in balance and excellence. Do not act against them.
Do not run away from the senses and sensory experience.
Watch the gap between your breaths, at the heart centre. At that point you have the darshan, the vision, of the Adi Shakti.
ಭೂತೇಷು ಸತತಂ ತಸ್ಯೈ ವ್ಯಾಪ್ತ್ಯೈ ದೇವ್ಯೈ ನಮೋ ನಮಃIndriyāṇām adhiṣṭhātrī bhūtānāṃ cākhileṣu yā
Bhūteṣu satataṃ tasyai vyāptyai devyai namo namaḥ
Sutra 23: the Devi as consciousness
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃCitirūpeṇa yā kṛtsnam etad vyāpya sthitā jagat
Namastasyai namastasyai namastasyai namo namaḥ
Who in the form of consciousness pervades this universe and abides in it: salutations to Her, salutations to Her, salutations to Her, salutations again and again.
The Adi Shakti, whose nature is chit shakti, the power of consciousness, fills the whole cosmos in the form of chetana. To Her, salutations, salutations, salutations.
This Devi fills the entire universe in the form of consciousness. She pervades it.
She is present here as the primal Mother. The power that runs the whole universe is the Adi Shakti.
Existence, that which exists, is supreme: whatever exists is consciousness.
Only because that power of chit shakti exists does everything exist. She is Ma, the Mother; She is awareness, death and birth. All of it whirls in a divine dance. The living energy of Shakti is the Adi Shakti.
She is night, She is day, She is the full moon and the new moon. She is time, the minute, the days, the months, the years and the seasons. All of this is the maya, the glory, of the Adi Shakti.
Guruji’s original notes in Kannada, as he wrote them.
ಈ ದೇವಿ ಸಮಸ್ತ ಪ್ರಾಣಿಗಳಲ್ಲಿ ಇಂದ್ರಿಯಗಳ ವ್ಯವಸ್ಥೆಗಳನ್ನು ಸಂಚಲನೆ ಗೊಳಿಸುವ ಮೂಲಕ ಸದಾ ಎಲ್ಲಾ ಪ್ರಾಣಿ ವರ್ಗಗಳಲ್ಲಿ ವ್ಯಾಪಿಸಿರುವ ಆ ಶಕ್ತಿಗೆ ನಮ್ಮ ನಮಸ್ಕಾರಗಳು ನಮಸ್ಕಾರಗಳು ನಮಸ್ಕಾರಗಳು.
ಭಾರತೀಯ ಸನಾತನ ಪರಂಪರೆಯಲ್ಲಿ ಒಂದು ನಿಯಮದ ವಿಧಿ ಇರುತ್ತದೆ. ಅದೇನೆಂದರೆ ಪ್ರತಿಯೊಂದು ಆಧ್ಯಾತ್ಮಿಕದ ಜ್ಞಾನಭಂಡಾರವನ್ನು ತಿಳಿಸಿದ ಮೇಲೆ ಮತ್ತೆ ಆ ಜ್ಞಾನವನ್ನು ಜ್ಞಾಪಿಸುತ್ತದೆ(remind) ಏಕೆಂದರೆ ನಿಮ್ಮ ಮನಸ್ಸಿನಲ್ಲಿ ಹಾಗೂ ಸುಪ್ತ ಮನಸ್ಸಿನಲ್ಲಿ ಭದ್ರವಾಗಿ ಇಟ್ಟುಕೊಳ್ಳಿ ಎಂದು ತಿಳುವಳಿಕೆ ಕೊಡುತ್ತದೆ.
ಅಂತಹ ಆದಿಶಕ್ತಿಯ ಲೀಲೆಯನ್ನು ಚೇತನವೆಂದು ಹೇಳುತ್ತೇವೆ. ನಮ್ಮಲ್ಲಿರುವ ಎಲ್ಲಾ ಇಂದ್ರಿಯಗಳ ವ್ಯವಸ್ಥೆಗಳನ್ನು ಸಂಚಲನೆ ಮಾಡುವಂತಹ ಒಂದು ಶಕ್ತಿ ಮೂಲರೂಪದಲ್ಲಿ ಸ್ಥಿತವಾಗಿರುತ್ತದೆ. ಹಾಗೂ ಅದು ಸತತವಾಗಿ ನಿರಂತರವಾಗಿ ಎಲ್ಲಾ ಪ್ರಾಣಿ ವರ್ಗಗಳಲ್ಲಿ ವ್ಯಾಪಿಸಿರುವ ಒಂದು ಚೇತನ ಶಕ್ತಿ ಇದೆ, ಅದು ಅಭಿವ್ಯಕ್ತಿಯನ್ನಾಗಿ ಮಾಡುತ್ತಿರುತ್ತದೆ (manifestation).
ಶರೀರ ಮತ್ತು ಮನಸ್ಸು ಉತ್ಪತ್ತಿಯಾದಾಗ ಇಂದ್ರಿಯಗಳ ವ್ಯವಸ್ಥೆಯು ಸಹ ಸಂಚಲನ ವಾಗುತ್ತದೆ. ಇಂದ್ರಿಯದ ವ್ಯವಸ್ಥೆ ಹೆಚ್ಚು ಕಡಿಮೆಯಾಗುವುದನ್ನು ಯಾರು ತಿಳಿದುಕೊಳ್ಳಲಾಗದು ಏಕೆಂದರೆ ಆ ದೇವಿ ಶಕ್ತಿ ನಿರಂತರವಾಗಿ ಶರೀರ ಮತ್ತು ಮನಸ್ಸಿನಲ್ಲಿ ಸತತವಾಗಿ ಇಂದ್ರಿಯಗಳ ಹಿಂದೆ ಅದರ ವ್ಯವಸ್ಥೆಗಳ ರೂಪದಲ್ಲಿ ವ್ಯಾಪಿಸುತ್ತಾಳೆ. ಇಂದ್ರಿಯಗಳ ಮೇಲೆ ಹೊರಗಿನಿಂದ ಬರುವ ಪ್ರಭಾವಗಳಿಂದ ಇಂದ್ರಿಯಗಳು ಮಂದವಾಗುತ್ತದೆ, ವಿಕೃತವಾಗುತ್ತದೆ.
ಏಕೆಂದರೆ ಅದು ಸಹ ಆದಿಶಕ್ತಿಯ ಲೀಲೆಯೇ. ಆಧ್ಯಾತ್ಮಿಕದ ದಾರಿಯಲ್ಲಿ ನಡೆದಾಗ ಮೊದಲು ಇಂದ್ರಿಯಗಳ ಮೇಲೆ ಜಗಳ ಶುರುವಾಗುವುದು. ಅದರ ಜೊತೆಗೆ ಹೊಡೆದಾಟ ಬಡಿದ ಆಗುವುದು. ಅದನ್ನು ಪರಿಶುದ್ಧ ದಾರಿಯಲ್ಲಿ ಪ್ರವೇಶಿಸಬೇಕು ಎಂದು ಹೇಳುತ್ತಾರೆ.
ಆದ್ದರಿಂದ ಪರಿಶುದ್ಧತೆಯ ದಾರಿಯಲ್ಲಿ ನಡೆದಾಗ ಇಂದ್ರಿಯಗಳ ಮೇಲೆ ಶತ್ರುತ್ವ ಪಡೆಯುತ್ತೇವೆ. ಯಾಕೆಂದರೆ ಅಲ್ಲಿ ಅದರ ದಿವ್ಯ ರೂಪಗಳನ್ನು ನಾವು ನೋಡಿರುವುದಿಲ್ಲ, ಅನುಭವಿಸಿರುವುದಿಲ್ಲ ಯಾಕೆಂದರೆ ಅಲ್ಲೂ ಸಹ ಆದಿಶಕ್ತಿಯ ಲೀಲೆ ಇರುತ್ತದೆ.
ಇಂದ್ರಿಯಗಳ ವ್ಯವಸ್ಥೆ ಏನೆಂದರೆ? ಅದರ ಆಕಾರ ಮತ್ತು ಬಣ್ಣಗಳು, ಅದರ ಒಳ್ಳೆಯ ಸುವಾಸನೆ, ಒಳ್ಳೆಯ ಸ್ವಾಧ, ಒಳ್ಳೆಯ ದೃಷ್ಟಿ, ಒಳ್ಳೆಯ ಶಬ್ದ, ಹಾಗೂ ಒಳ್ಳೆಯ ಮಧುರವಾದ ಸ್ಪರ್ಶ. ಇದೆಲ್ಲವೂ ಇಂದ್ರಿಯಗಳಿಂದ ಬಂದ ಅನುಭವವೇ. ಇದು ಸಹ ಆದಿಶಕ್ತಿಯ ಲೀಲೆಯೇ.
ಆದರೆ ಆಧ್ಯಾತ್ಮಿಕ ವ್ಯಕ್ತಿಗಳು ಇಂದ್ರಿಯಗಳ ಅನುಭವದಿಂದ ಗಾಬರಿಗೊಂಡು ಭಯಪಡುತ್ತಾರೆ. ಇಂದ್ರಿಯಗಳ ಅನುಭವ ನಮಗೆ ಬೇಡ ಬೇಡ ಎಂದು ಹೆದರಿ ಒದ್ದಾಡುತ್ತಾರೆ. ನಾವು ಚೇತನ ಶಕ್ತಿಯ ಅನುಭವ ಮಾತ್ರ ಪಡೆಯಬೇಕೆನ್ನುತ್ತಾರೆ. ಯಾಕೆಂದರೆ ಚೇತನದ ಅನುಭವ ಏನೆಂದು ಅವರಿಗೆ ಗೊತ್ತೇ ಇರುವುದಿಲ್ಲ.
ವಿಷಯವೇನೆಂದರೆ ಚೇತನ ಶಕ್ತಿಯೇ ಇಂದ್ರಿಯ ಮಾಧ್ಯಮದಿಂದ ಸ್ವಯಂ ಅನುಭವವನ್ನು ಮಾಡಿಸುತ್ತಿರುತ್ತದೆ. ಇದರ ಅನುಭವವನ್ನು ಪಡೆಯುವ ಬೇರೆ ವಿಧಿ ವಿಧಾನಗಳಿಲ್ಲ.
ಆದರೆ ನಮ್ಮ ಇಂದ್ರಿಯಗಳ ಅಶುದ್ಧತೆ ಇಂದ ಶುದ್ಧತೆಯನ್ನು ಪಡೆಯುವ ಆಧ್ಯಾತ್ಮಿಕ ಶಿವಶಕ್ತಿ ಸಾಧನೆಯ ಯಾತ್ರೆ ಯಾಗುತ್ತದೆ.
ex:- ಕಲ್ಲಿದ್ದಲನ್ನು ವಜ್ರವನ್ನು ಮಾಡುವ ವಿಧಾನದಂತೆ ಅಶುದ್ಧತೆಯಿಂದ ಶುದ್ಧತೆಯ ಯಾತ್ರೆ ಆಗುತ್ತದೆ.
ಯಾಕೆಂದರೆ ಇಂದ್ರಿಯಗಳನ್ನು ಗಮನಿಸಿ ಅವುಗಳ ಅನುಭವದ ಸ್ವಾದವನ್ನು ಬಿಟ್ಟಾಗ ಏನಾಗುತ್ತದೆ?
ಕೆಟ್ಟದ್ದನ್ನು ಕೇಳಬಾರದು / ಒಳ್ಳೆಯ ಶಬ್ದ ಕೇಳ ಬೇಕು
ಕೆಟ್ಟ ವಾಸನೆ ಸೇವಿಸಬಾರದು / ಒಳ್ಳೆಯ ವಾಸನೆ ಬೇಕು
ಕೆಟ್ಟದ್ದನ್ನು ನೋಡಬಾರದು / ಒಳ್ಳೆಯದನ್ನು ನೋಡಬೇಕು
ಕೆಟ್ಟದ್ದನ್ನು ಮುಟ್ಟಬಾರದು / ಒಳ್ಳೆಯದನ್ನೇ ಮುಟ್ಟಬೇಕು
ಕೆಟ್ಟ ಸ್ವಾದವನ್ನು ಮಾಡಬಾರದು / ಒಳ್ಳೆಯ ಸ್ವಾದ ಮಾಡಬೇಕು
ಆದರೆ ಇದೆಲ್ಲವೂ ಆದಿಶಕ್ತಿಯ ಲೀಲೆಯೇ ಆಗಿರುತ್ತದೆ. ಇದನ್ನೆಲ್ಲಾ ಬಿಟ್ಟಾಗ ನಾವು ಆಧ್ಯಾತ್ಮಿಕ ಸಾಧನೆಯಲ್ಲಿ ಮುಂದೆ ಹೋಗುತ್ತೇವೆ ಎಂಬ ಭ್ರಮೆಯಿಂದ ಇರುತ್ತಾರೆ. ಆದರೆ ಇದರಿಂದ ಇಂದ್ರಿಯಗಳು ಜಡವಾಗಿ (dull) ಆಗಿಬಿಡುತ್ತದೆ.
ಎಲ್ಲಿ ಇಂದ್ರಿಯಗಳ ವ್ಯವಸ್ಥಿತ ಸ್ಥಿತಿ ಇದೆಯೋ ಅಲ್ಲಿ ಶಕ್ತಿಯ ಇದೆ. ಅದು ಶಾಶ್ವತ ನಿಯಮವಾಗಿ, ಅದನ್ನು ನಮ್ಮ ಒಳಗೆ ಸರಿದೂಗಿಸಿ ಜೀವನದ ಮಾರ್ಗದರ್ಶನ ಕೊಡುತ್ತದೆ. (eternal law). ಇಂದ್ರಿಯ ವೆಂದರೆ ಅದು ಸಹ ದೇವಿ ಶಕ್ತಿಯ ರೂಪವೇ ಆಗಿ ಅದರ ಹಿಂದೆ ನಡೆಯುವ ಶಕ್ತಿಯೇ ಆದಿಶಕ್ತಿ ಆಗಿದೆ.
ಈ ಇಂದ್ರಿಯಗಳನ್ನು ಗಡಿಬಿಡಿ ಗೊಳಿಸುತ್ತಾ ಇರುವವರನ್ನು ಗಮನಿಸಿದಾಗ ಅವರು ಗಲಿಬಿಲಿಗೊಂಡು ಇಂದ್ರಿಯಗಳಿಂದ ಅನುಭವದ ಸ್ವಾದವನ್ನು ಅನುಭವಿಸದೇ, ಅನಾರೋಗ್ಯ ಗಳಿಂದ ಬಳಲುತ್ತಿರುತ್ತಾರೆ. ಯಾವುದೇ ಇಂದ್ರಿಯಗಳು ಏರುಪೇರಾದರೆ ಬಹಳ ತೊಂದರೆಗೆ ಒಳಗಾಗುತ್ತದೆ.
ಇಂತಹ ಸಮಸ್ಯೆಗಳನ್ನು ಸರಿ ಮಾಡಬೇಕಾದರೆ, ನಿಮ್ಮ ಇಂದ್ರಿಯಗಳ ಜೊತೆ ಅದರ sense ಗಳ ಮೇಲೆ ಸಹಜತೆಯಿಂದ, ಒಳ್ಳೆಯ ಸ್ಥಿತಿಯಿಂದ ಇರಬೇಕು.
ಯಾಕೆಂದರೆ ಇದು ದೋಷವಿಲ್ಲದ ಪರಿಶುದ್ಧವಾದ ಇಂದ್ರಿಯಗಳು. ಅವುಗಳನ್ನು ಹೆಚ್ಚು ಉತ್ತೇಜಿಸಬಾರದುಹು. ಇದು ಮಕ್ಕಳ ರೀತಿ. ಯಾವಾಗ ಹೆಚ್ಚು ಉತ್ತೇಜನವನ್ನು ಮಾಡುವಿರೋ ಆಗ ಇಂದ್ರಿಯಗಳು dull ಆಗುತ್ತದೆ / ಮಂದವಾಗುತ್ತದೆ.
ಆದ್ದರಿಂದ ಅದನ್ನು ದಿವ್ಯವಾಗಿ, ಶುದ್ಧವಾಗಿಡಬೇಕು. ಯಾಕೆಂದರೆ ಅದು ಆದಿಶಕ್ತಿಯ ಲೀಲೆಯಾಗಿ ಬಹಳ ಸುಂದರ ವಿಧಿಗಳಿಂದ ನಡೆಸುತ್ತಿರುತ್ತದೆ.
ಸಂಪೂರ್ಣ ಶರೀರ ಮತ್ತು ಮನಸ್ಸನ್ನು ಸಮಾನತೆಯಿಂದ, ಶ್ರೇಷ್ಠತೆಯಿಂದ ಇಟ್ಟುಕೊಂಡು ಕಾಪಾಡಿಕೊಳ್ಳಿ. ಅದರ ವಿರುದ್ಧವಾಗಿ ನಡೆಯಬೇಡಿ.
Sense and sensory experience ಗಳಿಂದ ಓಡಿ ಹೋಗಬೇಡಿ.
ನೀವು ಉಸಿರಾಡುವ ಮಧ್ಯದ gap ನಲ್ಲಿ heart center ನಲ್ಲಿ ಗಮನಿಸಿ ಆ ಬಿಂದುವಿನಲ್ಲಿ ಆದಿಶಕ್ತಿಯ ದರ್ಶನವಾಗುತ್ತದೆ.
ಇಂದ್ರಿಯಾಣಾಮಧಿಷ್ಠಾತ್ರೀ ಭೂತಾನಾಂ ಚಾಖಿಲೇಷು ಯಾ
ಭೂತೇಷು ಸತತಂ ತಸ್ಯೈ ವ್ಯಾಪ್ತೈ ದೇವ್ಯೈ ನಮೋ ನಮಃ
ಓಂ ನಮಃ ಚಂಡಿಕಾಯೆ || ಓಂ ದುರ್ಗಾ ಅರ್ಪಣ ಮಸ್ತು
ದುರ್ಗಾ ಸಪ್ತಶತಿ - ದೇವಿ ಸ್ತುತಿ
ಸೂತ್ರ - 23
ಚಿತಿರೂಪೇಣ ಯಾ ಕೃತ್ಸ್ನಮೇತದ್ವ್ಯಾಪ್ಯ ಸ್ಥಿತಾ ಜಗತ್
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
Who in the Form of Consciousness Pervades This Universe and Abides in It,
Salutations to Her, Salutations to Her, Salutations to Her, Salutations again and again.
ಚಿತ್ ಶಕ್ತಿ ಸ್ವರೂಪ ಚೇತನದ ರೂಪದಿಂದ ಸಮಸ್ತ ಬ್ರಹ್ಮಾಂಡದಲ್ಲಿ ವ್ಯಾಪಕವಾಗಿ ತುಂಬಿದೆ ಆದಿಶಕ್ತಿ, ಆಕೆಗೆ ನಮ್ಮ ನಮಸ್ಕಾರಗಳು ನಮಸ್ಕಾರಗಳು ನಮಸ್ಕಾರಗಳು
ಈ ದೇವಿ ಚೇತನ ರೂಪದಿಂದ ಸಂಪೂರ್ಣ ಬ್ರಹ್ಮಾಂಡದಲ್ಲಿ ತುಂಬಿದ್ದಾಳೆ ವ್ಯಾಪಕವಾಗಿದ್ದಾಳೆ.
ಆದಿ ಮಾತೆಯಾಗಿ / ಪ್ರಸ್ತುತದಿಂದ / ಉಪಸ್ಥಿತ ಆಗಿದ್ದಾಳೆ ಇಡೀ ಬ್ರಹ್ಮಾಂಡವನ್ನು ನಡೆಸುವ ಶಕ್ತಿಯೇ ಆದಿಶಕ್ತಿ.
existence that exist is extreme what ever is existing it is consciousness.
ಚಿತ್ ಶಕ್ತಿ ಸ್ವರೂಪ ಆ ಶಕ್ತಿ ಇದ್ದರೇನೇ ಎಲ್ಲವೂ ಇದೆ, ಅದೇ ಮಾ, ತಾಯಿ, ಪ್ರಜ್ಞೆ, ಸಾವು, ಮೃತ್ಯು, ಜನ್ಮ, ಎಲ್ಲವೂ ಸಹ ದೈವತ್ವದ ನೃತ್ಯ ಮಾಡಿ ಸುತ್ತಿರುತ್ತದೆ ಶಕ್ತಿಯ ಚೈತನ್ಯ ಅದೇ ಆದಿಶಕ್ತಿ.
ಅದೇ ರಾತ್ರಿ / ಅದೇ ಹಗಲು / ಅದೇ ಹುಣ್ಣಿಮೆ / ಅದೇ ಅಮಾವಾಸ್ಯೆ / ಅದೇ ಸಮಯ / ಅದೇ ನಿಮಿಷ / ಅದೇ ದಿನಗಳು / ಅದೇ ತಿಂಗಳುಗಳು / ಅದೇ ವರ್ಷಗಳು / ಅದೇ ಋತುಮಾನಗಳು. ಇದೆಲ್ಲವೂ ಆದಿಶಕ್ತಿ ಮಾಯೆ (ಮಹಿಮೆ).
Translated from Guruji’s Kannada notes on this sutra. The Devi Stuti talks are on the Spiritual Conscious YouTube channel. All 23 sutras are also in a free book, The Devi Within (PDF).