Devi Stuti · Sutra 12 of 23
The Nature of Peace
ಶಾಂತಿ · Shanti. Guruji on the verse that bows to the Devi as peace.
ಯಾ ದೇವೀ ಸರ್ವಭೂತೇಷು ಶಾನ್ತಿರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
Yā devī sarvabhūteṣu śāntirūpeṇa saṃsthitā
Namastasyai namastasyai namastasyai namo namaḥ
That Devi who abides in all beings in the form of peace: salutations to Her, again and again.
To this Devi Shakti, present in every class of creature in the world in the form of peace, salutations, salutations, salutations.
The word shanti is spoken here because it is essential (importantly).
Peace is the fundamental nature of life. Everyone, in their own way, is searching for peace in their life.
Looking at the ancient literature, two words are named among the blessed fruits of spiritual life: sukha and shanti. Sukha means happiness, and shanti means peace of mind.
Because it is the state without waves, everyone needs peace in their life.
There is no one who says they do not want peace. To find peace, each person follows some method or other.
When peace is present inside, a kind of gentleness and cheerfulness shows on the outside. So peace and cheerfulness are very important.
In another way, the four pillars of love, culture, peace and cheerfulness move together as essential forms. The sutra says the Devi, the Adi Shakti, is our own power, described in the form of a wonderful, supreme peace.
Peace is a pure nature, a pure form. When we are at peace, we experience divinity.
Qualities. Wherever the qualities of peace are seen, special divine qualities are seen too. Divinity and peace come together. Then we experience peace within us and find it, and that power appears as a divine living power of the Adi Shakti. Then we can experience it, live in it and make our life in it.
That is why all the sutras have been explained very simply, without difficulty.
People with complicated, egoistic minds have taken all of this in a difficult way. When we understand the sutras simply, that Devi’s power itself protects us, nurtures us and shows us the way. With peace, she makes our life divine.
When people try to describe the Devi, the Adi Shakti, in words, without noticing, seeing or experiencing her simplicity, they come to think she is very complicated and difficult.
They see her power as difficult through some ritual or other.
Example: through worship, through rites and rituals, through our own minds, through methods and many customs, people stay far away from the Devi’s power. So being close to that power is the form of peace.
When we are close to that power through peace, everything happens on its own. The flowing river flows peacefully. The wind blows peacefully. Nature too shows itself peacefully. In the same way, when peace unfolds and shows itself within us, we can realise the Adi Shakti simply.
Guruji’s original notes in Kannada, as he wrote them.
ಈ ದೇವಿ ಶಕ್ತಿ ಸಂಸಾರದ ಎಲ್ಲಾ ಪ್ರಾಣಿವರ್ಗಗಳಲ್ಲಿ ಶಾಂತಿ ರೂಪದಲ್ಲಿ ವಿದ್ಯಮಾನಳಾಗಿರುವ ಈ ಶಕ್ತಿಗೆ ನಮಸ್ಕಾರ ನಮಸ್ಕಾರ ನಮಸ್ಕಾರ.
ಶಾಂತಿ ಎನ್ನುವ ಶಬ್ದ ಅನಿವಾರ್ಯತೆಯಿಂದ ಹೇಳಲಾಗಿದೆ (importantly).
ಶಾಂತಿ ಎನ್ನುವುದು ಜೀವನದ ಮೂಲಭೂತ ಸ್ವಭಾವವು ಆಗಿದೆ. ಪ್ರತ್ಯೇಕವಾಗಿ ಶಾಂತಿಯನ್ನು ಎಲ್ಲರೂ ತಮ್ಮ ಜೀವನದಲ್ಲಿ ಹುಡುಕುತ್ತಿದ್ದಾರೆ.
ಪ್ರಾಚೀನ ಸಾಹಿತ್ಯಗಳನ್ನು ಗಮನಿಸಿದಾಗ, ಆಧ್ಯಾತ್ಮಿಕ ಜೀವನದ ಶುಭ ಪರಿಣಾಮಗಳಲ್ಲಿ ಎರಡು ಶಬ್ದಗಳನ್ನು ಹೇಳಲಾಗಿದೆ. ಸುಖ ಮತ್ತು ಶಾಂತಿ ಎಂಬ ಎರಡು ಪದಗಳು.
ಸುಖ ವೆಂದರೆ ಸಂತೋಷ (happiness) and ಶಾಂತಿ ಎಂದರೆ (peace of mind)
ನಿಷ್ ತರಂಗ ಆಗುವುದದರಿಂದ ಇಲ್ಲಿ ಪ್ರತಿಯೊಬ್ಬರಿಗೂ ತಮ್ಮ ತಮ್ಮ ಜೀವನದಲ್ಲಿ ಶಾಂತಿ ಬೇಕೇ ಬೇಕು.
ಶಾಂತಿ ಬೇಡವೆನ್ನುವವರು ಯಾರು ಇಲ್ಲ. ಶಾಂತಿಯನ್ನು ಶಾಂತಿಯನ್ನು ಪಡೆಯಲು ಯಾವುದೋ ಒಂದು ವಿಧಿ ವಿಧಾನಗಳನ್ನು ಅನುಸರಿಸುತ್ತಾನೆ.
ಶಾಂತಿ ಎನ್ನುವುದು ಶರೀರದ ಒಳಗೆ ಇದ್ದಾಗ, ಹೊರಗಿನ ಶರೀರದಲ್ಲಿ ಒಂದು ರೀತಿಯ ಸೌಮ್ಯತೆ, ಪ್ರಸನ್ನತೆ ಕಾಣುತ್ತದೆ. ಆದ್ದರಿಂದ ಶಾಂತಿ ಮತ್ತು ಪ್ರಸನ್ನತೆ ಬಹಳ ಮುಖ್ಯ.
ಬೇರೆ ರೀತಿಗಳಲ್ಲಿ ನಾಲ್ಕು ಸ್ತಂಭಗಳಾದ (pillars) ಪ್ರೇಮ, ಸಂಸ್ಕೃತಿ, ಶಾಂತಿ, ಪ್ರಸನ್ನತೆ ಅನಿವಾರ್ಯ ರೂಪಗಳಲ್ಲಿ ಜೊತೆಜೊತೆಯಾಗಿ ಸಾಗುತ್ತಿರುತ್ತದೆ. ಸೂತ್ರ ಹೇಳುತ್ತದೆ, ದೇವಿ ಆದಿಶಕ್ತಿಯೇ ನಮ್ಮ ಒಂದು ಶಕ್ತಿ, ಒಂದು ರೀತಿಯ ಅತ್ಯದ್ಭುತವಾದ ಶ್ರೇಷ್ಠವಾದ ಶಾಂತಿಯ ರೂಪದಲ್ಲಿ ವರ್ಣನೆ ಮಾಡಲಾಗಿದೆ.
ಶಾಂತಿ ಎಂದರೆ ಒಂದು ಪರಿಶುದ್ಧವಾದ ಸ್ವಭಾವವು, ಶುದ್ಧ ಸ್ವರೂಪವು. ಯಾವಾಗ ಶಾಂತಿಯಿಂದ ಇರುತ್ತೇವೋ ಆಗ ದಿವ್ಯತೆಯ ಅನುಭವವು ಆಗುತ್ತದೆ.
ಗುಣಗಳು
ಯಾವಾಗ ಎಲ್ಲೆಲ್ಲಿ ಶಾಂತಿಯ ಗುಣ ವಿಶೇಷಗಳು ಕಾಣುತ್ತದೋ, ಅಲ್ಲೆಲ್ಲಾ ವಿಶೇಷವಾದ ದಿವ್ಯತೆಯ ಗುಣಗಳು ಕಾಣುತ್ತದೆ. ಹಾಗೆ ದಿವ್ಯತೆ ಮತ್ತು ಶಾಂತಿ ಒಂದು ಕಡೆ ಸೇರಿಕೊಂಡಿರುತ್ತದೆ. ಆಗ ನಮ್ಮೊಳಗೆ ಶಾಂತಿಯ ಅನುಭವವಾಗಿ, ಅದನ್ನು ಕಂಡುಕೊಂಡು, ಆ ಶಕ್ತಿಯೇ ಆದಿಶಕ್ತಿಯ ಒಂದು ದಿವ್ಯ ಚೇತನ ಶಕ್ತಿಯಾಗಿ ಪ್ರಕಟವಾಗಿದೆ. ಆಗ ಅದನ್ನು ಅನುಭವಿಸಬಹುದು, ಅದರಲ್ಲಿ ಜೀವಿಸಬಹುದು, ಅದರಲ್ಲಿ
ಬದುಕಲು ಬಹುದು.
ಆದ್ದರಿಂದ ಎಲ್ಲಾ ಸೂತ್ರಗಳಲ್ಲಿ ಕಠಿಣ ವಿಲ್ಲದೆ ಬಹಳ ಸರಳ ರೂಪದಿಂದ ಸೂತ್ರಗಳನ್ನು ವಿವರಿಸಲಾಗಿದೆ.
ಜಟಿಲವಾದ ಮನಸ್ಸಿನ ಅಹಂಕಾರಗಳಿಂದ ಇಂತಹ ವಿಷಯಗಳಲ್ಲಿ ಎಲ್ಲವನ್ನು ಕಠಿಣವಾಗಿ ಅರ್ಥೈಸಿಕೊಂಡಿದ್ದಾರೆ. ಆದ್ದರಿಂದ ಸೂತ್ರಗಳನ್ನು ಸರಳವಾಗಿ ಅರಿತುಕೊಂಡಾಗ ಆ ದೇವಿ ಶಕ್ತಿಯೇ ಶಕ್ತಿಯಾಗಿ ನಮ್ಮನ್ನು ಕಾಪಾಡುತ್ತಾಳೆ, ಸಲಹುತ್ತಾಳೆ, ದಾರಿ ತೋರಿಸುತ್ತಾಳೆ. ಶಾಂತಿಯಿಂದ ಜೀವನದ ಜೀವನವನ್ನು ದಿವ್ಯವಾಗಿ ಸುತ್ತಾಳೆ.
ದೇವಿ ಆದಿಶಕ್ತಿಯನ್ನು, ಮಾತುಗಳಿಂದ ಹೇಳಬೇಕಾದರೆ, ಆಕೆಯ ಸರಳತೆಯನ್ನು ಗಮನಿಸದೆ, ನೋಡದೆ, ಅನುಭವಿಸದೆ, ಬಹಳ ಜಟಿಲವಾಗಿರುವಳೆಂದು, ಕಠಿಣವಾಗಿರುವಳೆಂದು ಅರ್ಥ ಮಾಡಿಕೊಂಡಿರುತ್ತಾರೆ.
ಯಾವುದೋ ಒಂದು ವಿಧಿ ವಿಧಾನಗಳಲ್ಲಿ ಆ ಶಕ್ತಿಯ ಕಠಿಣತೆಯನ್ನು ನೋಡುತ್ತಿರುತ್ತಾರೆ.
Ex- ಪೂಜೆ ಮಾಡುವುದರಿಂದ, ಕರ್ಮಕಾಂಡಗಳನ್ನು ಮಾಡುವುದರಿಂದ, ನಮ್ಮ ಮನಸ್ಸಿನಿಂದ, ವಿಧಿ ವಿಧಾನಗಳಿಂದ, ಬಹಳ ರೀತಿ ರಿವಾಜುಗಳಿಂದ, ಆ ದೇವಿ ಶಕ್ತಿಯಿಂದ ದೂರವಿರುತ್ತಾರೆ. ಆದುದರಿಂದ ಶಕ್ತಿಯ ನಿಕಟವಾಗಿರುವುದೇ ಶಾಂತಿ ರೂಪ.
ಶಾಂತಿಯಿಂದ ನಿಕಟವಾಗಿ ಶಕ್ತಿಯ ಜೊತೆಯಲ್ಲಿರುವಾಗ ಎಲ್ಲವೂ ತನಗೆ ತಾನೆ ನಡೆಯುತ್ತದೆ / ಹರಿಯುವ ನದಿಯು ಸಹ ಶಾಂತಿಯಾಗಿ ಹರಿಯುತ್ತದೆ / ಗಾಳಿಯು ಸಹ ಶಾಂತಿಯಾಗಿ ಬೀಸುತ್ತಿರುತ್ತದೆ / ಪ್ರಕೃತಿಯು ಸಹ ಶಾಂತಿಯಿಂದ ಪ್ರಕಟವಾಗಿರುತ್ತದೆ / ಅದೇ ರೀತಿ ನಮ್ಮೊಳಗೂ ಸಹ ಶಾಂತಿಯ ರೂಪದಲ್ಲಿ ವಿಕಸಿತವಾಗಿ ಪ್ರಕಟವಾಗಿದ್ದಾಗ ಆದಿಶಕ್ತಿಯನ್ನು ನಾವು ಸರಳವಾಗಿ ಸಾಕ್ಷಾತ್ಕರಿಸಿಕೊಳ್ಳ ಬಹುದು.
Translated from Guruji’s Kannada notes on this sutra. The Devi Stuti talks are on the Spiritual Conscious YouTube channel. All 23 sutras are also in a free book, The Devi Within (PDF).