Devi Stuti · Sutra 17 of 23
The Power of Memory
ಸ್ಮೃತಿ · Smriti. Guruji on the verse that bows to the Devi as memory.
ಯಾ ದೇವೀ ಸರ್ವಭೂತೇಷು ಸ್ಮೃತಿರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
Yā devī sarvabhūteṣu smṛtirūpeṇa saṃsthitā
Namastasyai namastasyai namastasyai namo namaḥ
That Devi who abides in all beings in the form of memory: salutations to Her, again and again.
Or watch all the Devi Stuti talks in the playlist.
To that Devi Shakti, present in every class of creature in the world in the forms of smriti, recollection and the power of memory, our salutations, salutations, salutations.
When we look at what a human being needs, what we need above all is memory.
It is memory alone, recollection, and in a very practical way it takes the form of memory.
This power fills us in many practical shapes and outlines. It stays as it is, seamless and very widespread.
When we see a person’s identity and recognise them, we recognise them through memory, through the power of recall.
Memory is made by the play of a power. Losing memory, the loss of recall, is also that power’s play.
Whether a memory is good or bad, positive or negative, is not what matters. It may become good, or it may become bad. Good and bad are personal.
All of this is a bundle of memory, a collection of memories.
But if we do not erase such memories now and then, we go mad. We become like a cauliflower, layer upon layer. This makes a person deeply unhappy. When we erase the layers in our memory, it is the Mother, in the form of power, who purifies the shape of what we remember.
Like a mother she nourishes us, gives us a good shape and good samskaras, and so sustains us. At that moment we move forward in life in good order; we walk on and evolve.
Above all, memory is as mysterious as it is physical. Even while living one and the same life, it is impossible to understand what kind of world memory creates inside us.
In one family there may be several children growing up at the same time. When they are grown and you ask them for their childhood memories, each has a different memory of their experience.
Their joys and sorrows, ups and downs, mistakes, studies: each person’s memory patterns are different.
Just as each person has their own patterns, each has a different personality.
Even in the same family, the circumstances and conditions inside each of them are different. The memory held in each mind grows in its own way, collects its own recollections and builds its own very different, mysterious arrangement.
Through modern science we know that when the brain’s memory is injured, a person may lose memory, have short-term or long-term memory loss, or lose their sight.
But what is recorded and stored inside a person works differently in each of us. For example, ten people see the same event, and because of the particular way each one remembers, they describe that one event in many ways.
On news channels we see one event described in many ways. Each describes it differently, from their own kind of memory, their own impression.
Some use memory to create an atmosphere of fear. Some create compassion. Some create within themselves a feeling of accepting life. Some create a very narrow feeling.
The facts of the event are the same (factfulness), but the power in the depths of each memory is different. Memory is very mysterious. We must learn to handle and work with our memory with good naturalness. This is a beautiful part of spiritual practice. When memory is kept very clean within, our inner journey becomes smooth and simple.
When memory is kept in a jumble, in confusion, it is like this.
Example: in a house where things are scattered everywhere, where it is dirty and disordered, clothes are thrown about and heaps of rubbish pile up without cleaning, how would you move around?
But when things are arranged properly and kept in order, you can find calm there and move about at ease.
In the same way, when memory is jumbled, polluted and spoiled, it creates anarchy within you. But when memory is cleaned naturally and kept in order, our life too stays in order.
The cause of memory, of the power of recall, is the play of the inner power within us. But our bonds with the outer world, the assumptions and beliefs of the outside world, work just as strongly. Memory is stored very widely in these two parts, family life and the world.
We cannot work on the inner power; it is as it is. But through samskaras, good assumptions, commitments, values and discipline, we can succeed.
From long ago we have worked very systematically at the level of the dream state, of memory, of the power of recall, transforming and reshaping it. When we change at that base, when we are transformed there, we ourselves are changed and transformed.
Because we are memory.
Take hold of the memory that has been uncovered, and work with it.
Dealing with the inner dimension is not possible, not the main thing. What happens in the outer dimension is very important. Do that work; practise that.
This is the meaning of the sutra smriti rupena.
Guruji’s original notes in Kannada, as he wrote them.
ಈ ದೇವಿ ಶಕ್ತಿ ಸಂಸಾರದ ಎಲ್ಲಾ ಪ್ರಾಣಿ ವರ್ಗಗಳಲ್ಲಿ ಸ್ಮೃತಿ ರೂಪ / ಜ್ಞಾಪಕ / ನೆನಪಿನ ಶಕ್ತಿ ಇಂತಹ ರೂಪಗಳಲ್ಲಿ ವಿದ್ಯಮಾನಳಾಗಿರುವ ಆ ದೇವಿ ಶಕ್ತಿಗೆ ನಮ್ಮ ನಮಸ್ಕಾರಗಳು ನಮಸ್ಕಾರಗಳು ನಮಸ್ಕಾರಗಳು.
ಮನುಷ್ಯನಲ್ಲಿ ಏನು ಬೇಕೆಂದು ನೋಡಿದಾಗ, ನಮಗೆ ಮುಖ್ಯವಾಗಿ ಬೇಕಾದದ್ದು ಸ್ಮೃತಿ.
ಅದು ಸ್ಮೃತಿ ಮಾತ್ರ / ಜ್ಞಾಪಕ / ಇದು ಬಹಳ ವ್ಯಾವಹಾರಿಕದಿಂದ ಸ್ಮೃತಿಯ ರೂಪದಲ್ಲಿದೆ.
ಇಂತಹ ಶಕ್ತಿ ನಮ್ಮೊಳಗೆ ಅನೇಕ ಅನೇಕ ವ್ಯವಹಾರಿಕ ರೂಪರೇಷೆಗಳಿಂದ ತುಂಬಿದೆ. ಅದು ಹೇಗಿದೆಯೋ ಹಾಗೆ ಇರುತ್ತದೆ. ಅಂತರವಿಲ್ಲದೆ ಬಹಳ ವ್ಯಾಪಕವಾಗಿ ಇರುತ್ತದೆ.
ಹೇಗೆ ಒಬ್ಬ ವ್ಯಕ್ತಿಯ identityಯನ್ನು (ಗುರುತಸಿ) ನೋಡುತ್ತೇವೋ, ಆ ವ್ಯಕ್ತಿಯನ್ನು ಗುರುತಿಸುತ್ತೇವೋ ಅದು ಸ್ಮೃತಿಯಿಂದ ಗುರುತಿಸುತ್ತೇವೆ (memory ಇಂದ / ಜ್ಞಾಪಕ ಶಕ್ತಿಯಿಂದ) ಗುರುತಿಸುತ್ತೇವೆ.
ಸ್ಮೃತಿ ಎನ್ನುವುದು ಒಂದು ಶಕ್ತಿಯ ಲೀಲೆಯಿಂದಲೇ ತಯಾರಾದದ್ದು. ಸ್ಮೃತಿ / ಜ್ಞಾಪಕ ಶಕ್ತಿ ಕಳೆದುಕೊಳ್ಳುವುದು / ಕಳೆದುಹೋಗುವುದು ಸಹ ಆ ಶಕ್ತಿಯ ಲೀಲೆಯೇ ಆಗಿರುತ್ತದೆ.
ಇಂತಹ ಸ್ಮೃತಿ ಅದು, ಒಳ್ಳೆಯದು / ಕೆಟ್ಟದ್ದು, +ve / -ve ಅನ್ನುವುದು ಮುಖ್ಯವಲ್ಲ. ಅದು ಒಳ್ಳೆಯದು ಆಗುತ್ತದೆ, ಅಥವಾ ಕೆಟ್ಟದ್ದು ಸಹ ಆಗುತ್ತದೆ. ಕೆಟ್ಟದ್ದು / ಒಳ್ಳೆಯದು ವ್ಯಕ್ತಿಗತವಾಗಿ ಇರುತ್ತದೆ.
ಇದೆಲ್ಲವೂ ಒಂದು bundle of memory (ಸ್ಮೃತಿಯ ಒಂದು ಸಂಗ್ರಹ).
ಆದರೆ ಇಂತಹ ಜ್ಞಾಪಕಗಳನ್ನು ಆಗಾಗ ಅಳಿಸದೆ ಇದ್ದರೆ ಹುಚ್ಚರಾಗುತ್ತಾರೆ. ಗೋಬಿ (cauliflower) ತರ ಆಗುತ್ತೇವೆ. ಇದರಿಂದ ಮನುಷ್ಯನು ಬಹಳ ದುಃಖ ಭರಿತನಾಗುತ್ತಾನೆ. ಯಾವಾಗ ಸ್ಮೃತಿ ಯಲ್ಲಿರುವ ಪದರಗಳನ್ನು ಅಳಿಸುತ್ತೇವೋ, ಆಗ ಜ್ಞಾಪಕದಲ್ಲಿರುವ ಆಕಾರವನ್ನು ಶುದ್ಧವಾಗಿಸುವುದೇ ಶಕ್ತಿಯ ರೂಪದ ತಾಯಿ.
ಹಾಗೆ ತಾಯಿಯ ತರಹ ಪೋಷಣೆಮಾಡಿ / ಒಳ್ಳೆಯ ಆಕಾರವನ್ನು ಕೊಟ್ಟು / ಒಳ್ಳೆಯ ಸಂಸ್ಕಾರವನ್ನು ಕೊಟ್ಟು ಪೋಷಿಸುತ್ತದೆ. ಆ ಕ್ಷಣ ನಮ್ಮ ಜೀವನದಲ್ಲಿ ಒಂದು ಒಳ್ಳೆಯ ವ್ಯವಸ್ಥೆಯಿಂದ ಮುಂದೆ ಮುಂದೆ ಸಾಗುತ್ತೇವೆ / ನಡೆಯುತ್ತೇವೆ / ವಿಕಾಸವಾಗುತ್ತೇವೆ.
ಮುಖ್ಯವಾಗಿ ಸ್ಮೃತಿಯು ಎಷ್ಟು ಭೌತಿಕವಾಗಿ ಇದೆಯೋ ಅಷ್ಟೇ ರಹಸ್ಯಮಯವಾಗಿದೆ. ಒಂದೇ ಜೀವನವನ್ನು ಜೀವಿಸುತ್ತಿದ್ದರು ನಮ್ಮೊಳಗೆ ಜ್ಞಾಪಕ ಶಕ್ತಿಯಿಂದ ಎಂತಹ ಜಗತ್ತು ಸೃಷ್ಟಿ ಮಾಡುತ್ತದೋ ಅದನ್ನು ಅರ್ಥಮಾಡಿಕೊಳ್ಳಲು ಅಸಾಧ್ಯ.
ಹಾಗೆ ಒಂದು ಪರಿವಾರದಲ್ಲಿ ಒಂದೇ ಸಮಯದಲ್ಲಿ ಹಲವಾರು ಮಕ್ಕಳಿದ್ದು, ಅವರು ದೊಡ್ಡವರಾದ ಮೇಲೆ ನಿಮ್ಮ ಚಿಕ್ಕವಯಸ್ಸಿನಿಂದ ಆದ ಜ್ಞಾಪಕಗಳನ್ನು ಹೇಳಿ ಎಂದಾಗ, ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಅನುಭವದ ಜ್ಞಾಪಕ memory ಇರುತ್ತದೆ.
ಅವರಲ್ಲಿ ಸುಖ-ದುಃಖ / ಏಳು ಬೀಳು / mistake / ಓದು-ಬರಹ / ಒಬ್ಬೊಬ್ಬರ memory patterns ಬೇರೆ-ಬೇರೆ ರೀತಿ ಆಗಿರುತ್ತದೆ.
ಹೇಗೆ ಒಬ್ಬರಲ್ಲಿ ಒಂದೊಂದು patterns ಇದೆಯೋ ಹಾಗೆ ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ವ್ಯಕ್ತಿತ್ವಗಳು ಬೇರೆ ಬೇರೆ ರೀತಿಯಾಗಿ ಇರುತ್ತದೆ.
ಒಂದೇ ಪರಿವಾರದಲ್ಲಿ ಇದ್ದರೂ ಅವರವರ ಒಳಗೆ ಒಂದೊಂದು ರೀತಿಯ ಸನ್ನಿವೇಶಗಳು circumstance / condition ಭಿನ್ನ ಭಿನ್ನವಾಗಿರುತ್ತದೆ. ಅವರ ಮನಸ್ಸಿನಲ್ಲಿರುವ ಶಕ್ತಿಯ memory ಒಂದೊಂದು ರೀತಿಯಿಂದ ಬೆಳೆದು ಜ್ಞಾಪಕ ಶಕ್ತಿಯನ್ನು ಸಂಗ್ರಹಿಸಿ ಒಂದೊಂದು ರೀತಿಯ ವ್ಯವಸ್ಥೆಗಳು ಬಹಳ ಬೇರೆ ಬೇರೆಯಾಗಿರುತ್ತದೆ / ರಹಸ್ಯಮಯ ವಾಗಿರುತ್ತದೆ.
ನಮ್ಮ ಮಸ್ತಿಷ್ಕದಲ್ಲಿನ ಜ್ಞಾಪಕ ಶಕ್ತಿಯ ಮೇಲೆ ಪೆಟ್ಟಾದಾಗ, ಜ್ಞಾಪಕ ಶಕ್ತಿ ಕಳೆದುಕೊಳ್ಳುವುದು short & long memory loss ಆಗುವುದು, ದೃಷ್ಟಿ ಕಳೆದುಕೊಳ್ಳುವುದು ಇದೆಲ್ಲವೂ ಈಗಿನ ವೈಜ್ಞಾನಿಕ ಪದ್ಧತಿಯಿಂದ ತಿಳಿಯುತ್ತೇವೆ.
ಆದರೆ ವ್ಯಕ್ತಿಯ ಒಳಗೆ ಅಂಕಿತವಾಗಿ ತುಂಬಿರುವ ಅದನ್ನು, ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ವಿಧಾನಗಳಿವೆ. ಉದಾ:- ಒಂದೇ ಘಟನೆ 10 ಜನ ನೋಡುತ್ತಾರೆ, ಅವರ ನೆನಪಿನ ವಿಶೇಷತೆಯಿಂದ ಒಂದೇ ಘಟನೆಯನ್ನು ಹಲವು ರೀತಿ ಹೇಳುತ್ತಾರೆ.
News media channel ಗಳಲ್ಲಿ ಗಮನಿಸಿದಾಗ ಒಂದೇ ಘಟನೆಯನ್ನು ಹಲವಾರು ರೀತಿಯ ವರ್ಣನೆಗಳನ್ನು ನಾವು ನೋಡುತ್ತೇವೆ. ಒಬ್ಬೊಬ್ಬರು ಒಂದೊಂದು ರೀತಿಯ ಸ್ಮೃತಿಯ ರೂಪದಿಂದ ಜ್ಞಾಪಕದ ಅನಿಸಿಕೆಯಿಂದ (impression) ಬೇರೆ ಬೇರೆ ರೀತಿಯಿಂದ ಹೇಳುತ್ತಾರೆ.
ಹಲವರು ಸ್ಮೃತಿಯಿಂದ ಭಯದ ವಾತಾವರಣವನ್ನು ನಿರ್ಮಿಸುತ್ತಾರೆ. ಕೆಲವರು ಕರುಣೆಯನ್ನು ನಿರ್ಮಾಣ ಮಾಡುತ್ತಾರೆ, ಕೆಲವರು ಒಳಗೆ ಜೀವನವನ್ನು ಸ್ವೀಕಾರ ಮಾಡುವ ಭಾವನೆಯನ್ನು ನಿರ್ಮಾಣ ಮಾಡುತ್ತಾರೆ, ಕೆಲವರು ಬಹಳ ಸಂಕುಚಿತವಾದ ಭಾವವನ್ನು ನಿರ್ಮಾಣ ಮಾಡುತ್ತಾರೆ.
ಸತ್ಯಾಸತ್ಯತೆಯನ್ನು factfullness (ಘಟನೆ) ಒಂದೇ ಆಗಿರುತ್ತದೆ, ಆದರೆ ಸ್ಮೃತಿಯ ಅಂತರಾಳದಲ್ಲಿನ ಶಕ್ತಿ ಬೇರೆ ಬೇರೆಯಾಗಿರುತ್ತದೆ. ಸ್ಮೃತಿ ಎನ್ನುವುದು ಬಹಳ ರಹಸ್ಯಮಯ ಆಗಿದೆ. ನಮ್ಮ ಸ್ಮೃತಿಯನ್ನು ಒಳ್ಳೆಯ ಸಹಜತೆಯಿಂದ, ಸಮಾಳಿಸುವುದು, ವ್ಯವಹರಿಸುವುದು ತಿಳಿದುಕೊಳ್ಳಬೇಕು. ಇದು ಆಧ್ಯಾತ್ಮಿಕ ಸಾಧನೆಯ ಒಂದು ಸುಂದರವಾದ ಭಾಗವಾಗಿದೆ. ಸ್ಮೃತಿಯನ್ನು ಅಂತರ್ಗತದಿಂದ ಬಹಳ ಶುದ್ಧವಾಗಿ ಇಟ್ಟುಕೊಂಡಾಗ, ನಮ್ಮ ಅಂತರ್ ಯಾತ್ರೆಯು ಬಹಳ ಸುಗಮವಾಗಿರುತ್ತದೆ / ಸರಳವಾಗಿಸುತ್ತದೆ.
ಸ್ಮೃತಿಯನ್ನು ಬಹಳ ಗಲಿಬಿಲಿಯಾಗಿ / ಗೊಂದಲವಾಗಿ ಇಟ್ಟುಕೊಂಡಾಗ,
ಉದಾ:- ಮನೆಯಲ್ಲಿ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಇಟ್ಟು, ಗಲೀಜು ಮಾಡಿಕೊಂಡು, ವ್ಯವಸ್ಥಿತವಾಗಿ ಇಲ್ಲದೆ ಬಟ್ಟೆ ಬರೆಗಳನ್ನು ಬಿಸಾಕಿಕೊಂಡು, ಗಲೀಜಾಗಿ ಇಟ್ಕೊಂಡು, ಕಸದ ರಾಶಿಯನ್ನು ತುಂಬಿಕೊಂಡು ಶುದ್ಧ ಇಲ್ಲದೆ, ಮನೆಯಲ್ಲಿ ಹೇಗೆ ಓಡಾಡುತ್ತಿರಿ?
ಆದರೆ ವಸ್ತುಗಳನ್ನು ಸರಿಯಾಗಿ ಜೋಡಿಸಿ ಕ್ರಮಬದ್ಧವಾಗಿ ಇರಿಸಿದಾಗ ಅಲ್ಲಿ ಪ್ರಶಾಂತತೆಯನ್ನು ಕಾಣಬಹುದು, ಆರಾಮಾಗಿ ಓಡಾಡಬಹುದು.
ಅದೇ ರೀತಿ ಸ್ಮೃತಿಯು ಗಲಿಬಿಲಿ ಆದಾಗ ಮಲಿನಗೊಳಿಸಿ, ಕೆಟ್ಟದಾಗಿಸಿಕೊಂಡಾಗ, ನಿಮ್ಮೊಳಗೆ ಅರಾಜಕತೆಯನ್ನು ಉಂಟುಮಾಡುತ್ತದೆ. ಆದರೆ ಸ್ಮೃತಿಯನ್ನು ಸಹಜತೆಯಿಂದ ಶುದ್ಧ ಮಾಡಿ (clean) ವ್ಯವಸ್ಥಿತವಾಗಿ ಇಟ್ಟುಕೊಂಡಾಗ ನಮ್ಮ ಜೀವನವು ಸಹ ವ್ಯವಸ್ಥಿತವಾಗೇ ಇರುತ್ತದೆ.
ಸ್ಮೃತಿ / ಜ್ಞಾಪಕ ಶಕ್ತಿಗೆ ನಮ್ಮೊಳಗಿನ ಅಂತರ್ ಶಕ್ತಿಯ ಲೀಲೆಯ ಕಾರಣ. ಆದರೆ ನಾವು ಹೊರಗಿನ ಸಂಸಾರದ ಬದ್ಧತೆ, ಹೊರಗಿನ ಜಗತ್ತಿನ ಧಾರಣೆ, ಮಾನ್ಯತೆ ಅದು ಸಹ ಅಷ್ಟೇ ಕೆಲಸ ಮಾಡುತ್ತದೆ. ಸಂಸಾರದ ಮತ್ತು ಜಗತ್ತಿನ ಈ ಎರಡು ಭಾಗಗಳಲ್ಲಿ ಸ್ಮೃತಿಯು ಬಹಳ ವಿಸ್ತಾರವಾಗಿ ಸಂಗ್ರಹಗೊಂಡಿದೆ.
ಆದರೆ ಅಂತರ್ ಶಕ್ತಿಯ ಮೇಲೆ ನಾವು ಕೆಲಸ ಮಾಡಲಾಗದು, ಹೇಗಿರುತ್ತದೋ ಹಾಗೆ ಇರುತ್ತದೆ. ಆದರೆ ನಾವು ಸಂಸ್ಕಾರಗಳಿಂದ, ಒಳ್ಳೆಯ ಧಾರಣೆಗಳಿಂದ, ಬದ್ಧತೆಗಳಿಂದ, ಮಾನ್ಯತೆ ಇಂದ ಶಿಸ್ತಿನಿಂದ ಸಫಲತೆ ಪಡೆಯಬಹುದಾಗಿದೆ.
ಹಿಂದಿನಿಂದಲೂ ಬಹಳ ವ್ಯವಸ್ಥಿತವಾದ ಸ್ವಪ್ನಾವಸ್ಥೆಯ / memoryಯ / ಜ್ಞಾಪಕ ಶಕ್ತಿಯ ತಳದಲ್ಲಿ ಪರಿವರ್ತಿಸಿ ರೂಪಾಂತರಿಸುತ್ತೇವೆ. ಯಾವಾಗ ತಳದಲ್ಲಿ ನಾವು ಬದಲಾಗುತ್ತೇವೋ, ರೂಪಾಂತರ ಆಗುತ್ತೇವೋ, ನಾವು ಸಹ ಬದಲಾಗಿ ರೂಪಾಂತರವನ್ನು ಪಡೆಯುತ್ತೇವೆ.
ಯಾಕೆಂದರೆ ನಾವು ಸ್ಮೃತಿಯೇ ಆಗಿದ್ದೇವೆ.
ಅನಾವರಣಗೊಂಡ ಸ್ಮೃತಿಯನ್ನು ಹಿಡಿದು ಅದರ ಜೊತೆ ವ್ಯವಹಾರ ಮಾಡು / ಕೆಲಸ ಮಾಡು.
ಆಂತರಿಕ ಆಯಾಮದ ವ್ಯವಹಾರ ಸಂಭವವಲ್ಲ / ಮುಖ್ಯವಲ್ಲ. ಹೊರಗಿನ ಆಯಾಮದ ಸಂಭವ ಬಹಳ ಮುಖ್ಯ. ಅಂತಹ ಕೆಲಸ ಮಾಡು, ಸಾಧನೆ ಮಾಡು.
ಇದೇ ಸೂತ್ರದ ಅರ್ಥ ಸ್ಮೃತಿ ರೂಪೇಣ.
Translated from Guruji’s Kannada notes on this sutra. The Devi Stuti talks are on the Spiritual Conscious YouTube channel. All 23 sutras are also in a free book, The Devi Within (PDF).